ಜಸ್‌ಪ್ರೀತ್ ಜಸ್‌ಬೀರ್ ಸಿಂಘ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ. == ಆರಂಭಿಕ ಜೀವನ == ಬುಮ್ರಾ ರವರು ಡಿಸೆಂಬರ್ ೦೬,೧೯೯೩ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಗುಜರಾತ್ ನ ೧೯ರ ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಡಲು ಆರಂಭಿಸಿದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು. == ವೃತ್ತಿ ಜೀವನ == === ಐಪಿಎಲ್ ಕ್ರಿಕೆಟ್ === ಏಪ್ರಿಲ್ ೦೪, ೨೦೧೩ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರಲ್ಲಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ೩೨ ರನ್ ನೀಡಿದರು.ಇಲ್ಲಿಯವರೆಗೆ ಐಪಿಎಲ್ ನಲ್ಲಿ ೪೬ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ. === ಅಂತರರಾಷ್ಟ್ರೀಯ ಕ್ರಿಕೆಟ್ === ಜನವರಿ ೨೩, ೨೦೧೬ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗು ಕೊನೆಯ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ತಮ್ಮ ೧೦ ಓವರ್ ಗಳಲ್ಲಿ ಕೇವಲ ೪೦ರನ್ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಹಾಗು ಆಲರೌಂಡರ್ ಜೇಮ್ಸ್ ಫಲ್ಕನರ್ ರವರ ವಿಕೆಟ್ ಪಡೆದರು. ಜನವರಿ ೨೬, ೨೦೧೬ರಂದು ಅಡಿಲೇಡ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ಕೇವಲ ೨೩ ರನ್ ನೀಡಿ ೩ ವಿಕೆಟ್ ಪಡೆದರು. == ಶ್ರೇಯಾಂಕ == ಪ್ರಸ್ತುತ ಬುಮ್ರಾ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ, ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೦೧ನೇ ಸ್ಥಾನವನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೦೩ನೇ ಸ್ಥಾನವನ್ನು ಹೊಂದಿದ್ದಾರೆ. == ಪಂದ್ಯಗಳು == ಏಕದಿನ ಕ್ರಿಕೆಟ್ : ೨೮ ಪಂದ್ಯಗಳು ಟಿ-೨೦ ಕ್ರಿಕೆಟ್ : ೩೦ ಪಂದ್ಯಗಳು ಐಪಿಎಲ್ ಕ್ರಿಕೆಟ್ : ೪೭ ಪಂದ್ಯಗಳು === ವಿಕೆಟ್ ಗಳು === ಏಕದಿನ ಪಂದ್ಯಗಳಲ್ಲಿ : ೫೨ ಟಿ-೨೦ ಪಂದ್ಯಗಳಲ್ಲಿ : ೪೦ ಐಪಿಎಲ್ ಪಂದ್ಯಗಳಲ್ಲಿ : ೪೬ == ಉಲ್ಲೇಖಗಳು ==